ಶ್ರೀ ಸಿದ್ಧಗಂಗಾ ಮಹಾಸ್ವಾಮೀಜಿಗಳಿಂದ `ಲವ್‍ ಯೂ ಶಂಕರ್` ಚಿತ್ರದ `ಓಂ ನಮಃ ಶಿವಾಯ` ಹಾಡು ಬಿಡುಗಡೆ
Posted date: 07 Sat, Oct 2023 08:21:17 AM
ಭಾರತದ ಅತೀ ದೊಡ್ಡ ಕಾಂಪೋಸಿಟ್‍ ಅನಿಮೇಷನ್‍ ಡ್ರಾಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ಲವ್‍ ಯೂ ಶಂಕರ್` ಚಿತ್ರದ `ಓಂ ನಮಃ ಶಿವಾಯ` ಹಾಡನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಬಿಡುಗಡೆ ಮಾಡಿದ್ದಾರೆ. ವರ್ಧನ್ ಸಿಂಗ್ ಸಂಗೀತ ಸಂಯೋಜಿಸಿದ್ದಾರೆ.
 
ರಿಲಯನ್ಸ್ ಎಂಟರ್ ಟೈನ್ ಮೆಂಟ್ ಸ್ಟುಡಿಯೋ ಮತ್ತು ಎಸ್.ಡಿ. ವರ್ಲ್ಡ್ ಫಿಲಂ ಪ್ರೈವೇಟ್‍ ಲಿಮಿಟೆಡ್‍ ಜೊತೆಯಾಗಿ ಅರ್ಪಿಸುತ್ತಿರುವ `ಲವ್‍ ಯೂ ಶಂಕರ್`ಚಿತ್ರವನ್ನು ಜನಪ್ರಿಯ ನಿರ್ದೇಶಕ  ‘ಮೈ ಫ್ರೆಂಡ್‍ ಗಣೇಶ’ ಖ್ಯಾತಿಯ ರಾಜೀವ್ ಎಸ್‍.ರುಯಾ ನಿರ್ದೇಶನ ಮಾಡಿದ್ದಾರೆ. 
 
`ಲವ್‍ ಯೂ ಶಂಕರ್` ಚಿತ್ರದಲ್ಲಿ ಶ್ರೇಯಸ್‍ ತಲಪಾಡೆ, ತನಿಷಾ ಮುಖರ್ಜಿ, ಸಂಜಯ್‍ ಮಿಶ್ರಾ, ಮನ್‍ ಗಾಂಧಿ, ಅಭಿಮನ್ಯು ಸಿಂಗ್‍, ಪ್ರತೀಕ್‍ ಜೈನ್‍, ಹೇಮಂತ್‍ ಪಾಂಡೆ ಮುಂತಾದವರು ನಟಿಸಿದ್ದು, ಈ ಚಿತ್ರವು ತನ್ನ ವಿಭಿನ್ನ ಕಥಾಹಂದರ ಮತ್ತು ಅದ್ಭುತ ಅಭಿನಯಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಲಿದೆ. ತೇಜಸ್‍ ದೇಸಾಯಿ ಮತ್ತು ಸುನೀತಾ ದೇಸಾಯಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವರ್ಧನ್‍ ಸಿಂಗ್‍ ಮತ್ತು ರಾಮಿರಾ ತನೇಜ ಸಹ-ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
 
ಕನ್ನಡ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರವು ನವಿರಾದ ಭಾವನೆಗಳು, ಪಾತ್ರಗಳು, ಹಾಡುಗಳು ಮತ್ತು ಕಲಾವಿದರ ಅದ್ಭುತ ಪಾತ್ರಪೋಷಣೆಯಿಂದ ಎಲ್ಲಾ ಭಾಷೆಗಳ ಮತ್ತು ಪ್ರದೇಶಗಳ ಪ್ರೇಕ್ಷಕರಿಗೆ ಆಪ್ತವಾಗಲಿದೆ ಎಂದು ಚಿತ್ರತಂಡ ನಂಬಿದೆ. `ಲವ್‍ ಯೂ ಶಂಕರ್` ಚಿತ್ರವು ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. Visica films ವಿತರಣಾ ಸಂಸ್ಥೆ   ಕರ್ನಾಟಕದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed